Friday, July 23, 2010

22-09-2010 ರ ಪ್ರಜಾವಾಣಿ ಇಂಟರ್‌ನೆಟ್‌ನಲ್ಲಿ ಕನ್ನಡವನ್ನು ಸಮಗ್ರವಾಗಿ ಬಳಸುವ ಬಗ್ಗೆ ಬರೆದ ನನ್ನ ಕೃತಿ "ಕನ್ನಡದ ಈ ಲೋಕ" ವನ್ನು ಪರಿಚಯ ಮಾಡಿಕೊಟ್ಟುದಕ್ಕಾಗಿ ಕನ್ನಡ ಪ್ರಿಯ ಪ್ರಜಾವಾಣಿಗೆ ಅನಂತ ಕೃತಜ್ಞತೆಗಳು.

ಅದೇ ರೀತಿಯಲ್ಲಿ 26-09-10 ರಂದು ಹೊಸ ದಿಗಂತ ಮತ್ತು ವಾರ್ತಾ ಭಾರತಿ, 03-10-10 ರಂದು ವಿಜಯ ಕರ್ನಾಟಕ "ಕನ್ನಡದ ಈ ಲೋಕ" ಕೃತಿಯನ್ನು ವಿವರವಾಗಿ ಪರಿಚಯಿಸಿದ್ದಕ್ಕೆ ಪತ್ರಿಕೆಗಳಿಗೆ ಧನ್ಯವಾದಗಳು-----ಎನ್‌. ಭವಾನಿಶಂಕರ್‌ 9242 232323


ವೀಡಿಯೋ ಕವನವೆಂದರೆ....



ಇದುವರೆಗೆ ಬಿಳಿ ಹಾಳೆಯ ಮೇಲೆ ಬರೆದುಕೊಂಡು ಬಂದ ಕವನಗಳಿಗೂ ವೀಡಿಯೋದ ಮೂಲಕ ಚಿತ್ರಿಸುವ ಕವನಗಳಿಗೂ ಮೂಲಭೂತವಾದ ವ್ಯತ್ಯಾಸವಿದೆಯೆ ಎಂದು ಕೇಳಿದರೆ ಅದಕ್ಕೆ ಉತ್ತರ ಇಲ್ಲ ಎಂಬುದೇ ಆಗಿದೆ. ಕವನಗಳ ಮೂಲಭೂತವಾದ ಲಕ್ಷಣವೆಂದರೆ ಸಂಕ್ಷಿಪ್ತತೆ, ಕಲಾತ್ಮಕತೆ ಹಾಗೂ ದಾರ್ಶನಿಕತೆ.
ಜಾಗತೀಕರಣ, ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆ, ಮಾಧ್ಯಮ ಕ್ರಾಂತಿಯಿಂದಾಗಿ ಕವಿಯಾದವನು ಅಕ್ಷರಗಳ ನೆರವಿಲ್ಲದೆ ಕವನವನ್ನು ಸೃಷ್ಟಿಸುವ ಹೊಸ ಅವಕಾಶ ಒದಗಿಬಂದಿದೆ. ಬಹುಶಃ ಅದನ್ನು ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಉಡುಪಿಯ ಶಿರ್ವ ಸಮೀಪದ ಸೈಂಟ್ ಮೆರೀಸ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್ ರಾವ್‌ರವರು ಬಳಸಿಕೊಂಡಿದ್ದಾರೆ.




ಕವನವೆಂದರೆ ಬದುಕಿನ ಯಾವುದೇ ಅನುಭವವನ್ನು ಅಕ್ಷರಗಳ ಮೂಲಕ ಕಲಾತ್ಮಕವಾಗಿ-ಸಹಜವಾದ ಛಂದಸ್ಸಿನ ಮೂಲಕ ಹೇಳುವುದು. ವೀಡಿಯೋ ಕವನದ ಸ್ವರೂಪ ಮತ್ತು ಆಶಯ ಇದೇ ಆಗಿರುತ್ತದೆ. ವೀಡಿಯೋ ಕವನವೆಂದರೆ ಕ್ಯಾಮರಾದ ಮುಂದೆ ನಿಂತು ಕವನವನ್ನು ಓದುವುದಲ್ಲ. ಚಲನ ಚಿತ್ರ, ಶಬ್ಧ, ಸಂಗೀತವನ್ನು ಬಳಸಿಕೊಂಡು ಹೇಳಬೇಕಾದ್ದನ್ನು ಹೇಳುವುದು. ವೀಡಿಯೋ ಕ್ಯಾಮರಾದ ಮೂಲಕ ಜೀವನದ ಸಂಗತಿಗಳನ್ನು ಚಿತ್ರೀಕರಿಸುವುದು. ಹೀಗೆ ಚಿತ್ರೀಕರಿಸುವಾಗ ಸೃಜನಶೀಲತೆ, ಒಳನೋಟ ಮತ್ತು ದಾರ್ಶನಿಕತೆ ಬೇಕು. ಹೀಗೆ ಚಿತ್ರೀಕರಿಸಿದ್ದನ್ನು ಕಂಪ್ಯೂಟರಿಗೆ ತರಬೇಕು. ಉದಾಹರಣೆಗಾಗಿ ಎರಡು ಗಂಟೆಯಷ್ಟು ಕಾಲ ಚಿತ್ರಿಸಿದ ರಥೋತ್ಸವ ಮತ್ತು ಜಾತ್ರೆಯನ್ನು ಹತ್ತು ನಿಮಿಷದ ಅವಧಿಗೆ ಸಂಕ್ಷಿಪ್ತಗೊಳಿಸಬೇಕು. ಈ ಸಂಕ್ಷಿಪ್ತಗೊಳಿಸುವಲ್ಲಿಯೂ ಕವಿ ಮನಸ್ಸು ಕೆಲಸ ಮಾಡುತ್ತದೆ. ಇಲ್ಲಿಯ ಮುಖ್ಯವಾದ ಸಲಕರಣೆ ಎಡಿಟಿಂಗ್ ಅಂದರೆ ಸಂಕಲನ. ಈ ಸಂಕಲನ ಕ್ರಿಯೆ ಕವನಕ್ಕೆ ಸೃಜನಶೀಲತೆ, ಒಳನೋಟ ಮತ್ತು ದಾರ್ಶನಿಕತೆಯನ್ನು ಒದಗಿಸುವ ಇನ್ನೊಂದು ಹಂತ.




ವೀಡಿಯೋ ಕವಿಗೆ ಕವಿ ಮನಸ್ಸಿನ ಜೊತೆಗೆ ವೀಡಿಯೋ ತಂತ್ರಜ್ಞಾನದ ಅರಿವು ಇರಬೇಕು. ಎನ್. ಭವಾನಿಶಂಕರ್‌ರವರು ತಮ್ಮ ವೀಡಿಯೋ ಕವನಗಳಿಗಾಗಿ-ವೀಡಿಯೋ ಕ್ಯಾಮರಾದ ಮೂಲಕ ಚಿತ್ರೀಕರಣ, ಎಡಿಟಿಂಗ್ ಸಾಫ್ಟ್‌ವೇರ್ ಮೂಲಕ ಕಂಪ್ಯೂಟರ್‌ನಲ್ಲಿ ಸಂಕಲನ, ಫೋಟೋಷಾಪ್ ಮತ್ತು ಇತರ ಸಾಫ್ಟ್‌ವೇರ್‌ಗಳ ಮೂಲಕ ಗ್ರಾಫಿಕ್ಸ್, ಸಂಗೀತಕ್ಕೆ ಸಂಬಂಧಿಸಿದ ಸಾಫ್ಟ್‌ವೇರ್‌ಗಳ ಮೂಲಕ ತಾವೇ ಸಂಗೀತ ನೀಡುತ್ತಾರೆ. ಅಂದರೆ ಇದು ಏಕ ವ್ಯಕ್ತಿಯ ಸಿನಿಮಾ. ಕವಿ ಏಕಾಂಗಿ ಹೇಗೋ ಹಾಗೆ.




ಕೆಲವು ಜಾಹೀರಾತುಗಳು, ಟೀವಿ ಕಾರ್ಯಕ್ರಮಗಳ ಶೀರ್ಷಿಕೆಗಳಗಳಲ್ಲಿ ಕೆಲವೊಮ್ಮೆ ಈ ಗುಣಗಳು ಕಂಡುಬರಬಹುದಾದರೂ ಅವು ವೀಕವನವಾಗುವುದಿಲ್ಲ. ಏಕೆಂದರೆ ಅವುಗಳಲ್ಲಿ ಸಂಕ್ಷಿಪ್ತತೆ, ಮತ್ತು ಕಲಾತ್ಮಕತೆಯಿದ್ದರೂ ದಾರ್ಶನಿಕತೆ ಇರುವುದಿಲ್ಲ ಅಥವಾ ಮಾನವತೆಯ ಪರವಾಗಿರುವುದಿಲ್ಲ. ಅಥವಾ ಅಲ್ಲಿನ ಎಲ್ಲಾ ಚಿತ್ರ ತುಣುಕುಗಳು ವೀಡಿಯೋ ಕವನದಂತೆ ಕೇಂದ್ರ ದರ್ಶನದ ಕಡೆಗೆ ಮುಖ ಮಾಡಿ ನಿಲ್ಲುವುದಿಲ್ಲ. ಈ ಇಲ್ಲಗಳು ಹೌದು ಆದಾಗ ಅವು ವೀಡಿಯೋ ಕವನವಾಗುತ್ತವೆ.




ಉದಾಹರಣೆಗಾಗಿ ಏರ್‌ಟೆಲ್‌ನ ಈ ಹಿಂದೆ ಬಂದ ಎಕ್ಸ್‌ಪ್ರೆಸ್ ಯುವರ್‌ಸೆಲ್ಫ್, ಎಂಟಿ‌ಆರ್‌ನ ಪುಳಿಯೋಗರೆಯ ಕಳ್ಳ, ಕೆಲವು ಕಾರ್ಯಕ್ರಮಗಳ ಆರಂಭದಲ್ಲಿ ಬರುವ ಒಂದು ಸಂಗೀತದ ಮೇಲೆ ವೇಗವಾಗಿ ಸಾಗುವ ಚಿತ್ರದ ತುಣುಕುಗಳಲ್ಲಿ ಇಂತಹ ಲಕ್ಷಣ ಕಂಡು ಬರುವುದಾದರೂ ಅವುಗಳಲ್ಲಿ- ದಾರ್ಶನಿಕತೆ ಅಥವಾ ಮಾನವೀಯತೆ ಅಥವಾ ಅಲ್ಲಿನ ಎಲ್ಲಾ ಚಿತ್ರ ತುಣುಕುಗಳು ಆ ಕೃತಿಯ ಕೇಂದ್ರ ದರ್ಶನದ ಕಡೆಗೆ ಮುಖ ಮಾಡಿ ನಿಲ್ಲುವ, ಅದಕ್ಕಾಗಿ ದುಡಿಯುವ ಅಂಶಗಳು ಇರುವುದಿಲ್ಲ.
ಆದ್ದರಿಂದ ಇಲ್ಲಿ ಪೆನ್ನಿಗೆ ಬದಲಾಗಿ ವೀಡಿಯೋ ಕ್ಯಾಮರಾ, ಕಂಪ್ಯೂಟರ್, ಎಡಿಟಿಂಗ್, ಗ್ರಾಫಿಕ್ಸ್ ಸಲಕರಣೆಗಳು ಕೆಲಸ ಮಾಡುತ್ತವೆ. ಒಂದು ಪೆನ್ನಿನ ಹಿಂದೆ ಇರುವಂತೆಯೆ ಇಲ್ಲಿ ಕೂಡ ಜೀವನಾನುಭವ, ಬಹುಜ್ಞತೆ, ದಾರ್ಶನಿಕತೆ, ಕಲಾತ್ಮಕ ದೃಷ್ಟಿಕೋನ, ಮಾನವತೆಯ ಅಂಶಗಳು ಪ್ರತಿ ಹಂತದಲ್ಲೂ ಕೆಲಸಮಾಡಲೇ ಬೇಕಾಗುತ್ತದೆ.
ಒಂದು ಒಳ್ಳೆಯ ಕಥೆ ಹೇಳುವ ಕಲಾತ್ಮಕ ಸಿನಿಮಾಕ್ಕೂ ಇದನ್ನು ಹೋಲಿಸಬಹುದು. ಅದರೆ ಅಲ್ಲಿ ಕೃತಿಯ ಸ್ವರೂಪ ವಿಸ್ತಾರವಾಗಿರುತ್ತದೆ ಕಾದಂಬರಿಯಂತೆ. ಆದರೆ ಅಲ್ಲಿ ಸಂಕ್ಷಿಪ್ತತೆಯ ಅಂಶವಿರುವುದಿಲ್ಲ. ಆದರೆ ವೀಡಿಯೋ ಕವನದಲ್ಲಿ ಅದು ಇರಲೇ ಬೇಕಾಗುತ್ತದೆ.




ಹಾಗಾದರೆ ಒಂದು ಕವನಕ್ಕೂ ವೀಡಿಯೋ ಕವನಕ್ಕೂ ವ್ಯತ್ಯಾವಿಲ್ಲವೆ. ಇದೆ. ಒಂದು ಬಿಳಿ ಹಾಳೆಯ ಮೇಲೆ ಪೆನ್ನಿನ ಮೂಲಕ ಏಕಾಂತತೆಯ ಧ್ಯಾನಸ್ಥ ಸ್ಥಿತಿಯಲ್ಲಿ ಏನನ್ನು ಬೇಕಾದರೂ ಚಿತ್ರಿಸಬಹುದು. ಆದರೆ ವೀಕವನದ ಕವಿಯೂ ಜನಜಂಗುಳಿಯ ನಡುವೆ ಏಕಾಂತತೆಯ ಧ್ಯಾನಸ್ಥ ಸ್ಥಿತಿಯನ್ನು ಸಾಧಿಸಿಕೊಳ್ಳಬೇಕು. ಆದರೆ ಇಲ್ಲಿನ ಕವಿ ತನಗೆ ಬೇಕಾದ ಒಂದು ಹೂವಿನ ಅಥವಾ ಆಕಾಶದ ಬಣ್ಣ ಬರುವವವರೆಗೆ, ತನ್ನ ಕಲ್ಪನೆಯ ಭಿಕ್ಷುಕ ಸಿಗುವವರೆಗೆ ಕಾಯಬೇಕಾಗುತ್ತದೆ. ಕಂಪ್ಯೂಟರ್‌ನ ಎಡಿಟಿಂಗ್‌ನಲ್ಲಿ ಚಿತ್ರಗಳನ್ನು ಬೇರೆ ಬೇರೆ ರೀತಿಯಲ್ಲಿ ಜೋಡಿಸಿ ತನಗೆ ಬೇಕಾದ ಪರಿಣಾಮ ಬಂತೆ ಎಂದು ಕಾಯಬೇಕಾಗುತ್ತದೆ. ಅಂದರೆ ಅಕ್ಷರದ ಕವಿ ಇದನ್ನೆಲ್ಲ ಮಾಡುತ್ತಾನಾದರೂ ಅವನಿಗಿಂತ ಹೆಚ್ಚಿನ ಸಮಯ ಈ ಕವಿಗೆ ಬೇಕು.




ಕವಿಗೆ ಅಕ್ಷರ ಜಗತ್ತು ಆಧಾರವಾದರೆ ಇಲ್ಲಿ ಚಿತ್ರ, ಧ್ವನಿ ಮತ್ತು ಸಂಗೀತದ ಅವಕಾಶಗಳು ಇರುವುದರಿಂದ ಇಲ್ಲಿನ ಹೋಲಿಕೆ ಅಥವಾ ಚಿತ್ರಣ ಕವಿ ಕೊಡುವ ಚಿತ್ರಣ ಅಥವಾ ಹೋಲಿಕೆಗಿಂತ ಭಿನ್ನವಾಗಿರುತ್ತದೆ. ಕವಿ-ಎಂಥ ತಂಪು ಗಾಳಿ ಬೀಸಿತು, ಮನಕೆ ಮುದವು ಬಂದಿತು-ಎಂದರೆ ವೀಡಿಯೋ ಕವಿ-ಗಾಳಿಗೆ ಅಲುಗುವ ಮರದ ಹಸಿರು ಗೆಲ್ಲು, ಅಲುಗಾಡುವ ಎಲೆಯ ಮೇಲಿನ ಇಬ್ಬನಿ, ನದಿಯ ತೀರದಲ್ಲಿ ಕುಳಿತಿರುವ ಅವನ ಮುಖದ ಕಿರು ನಗೆಯ ಅನಂತರ ಬಿಸಿಲ ಕಿರಣದ ಹಿನ್ನೆಲೆಯಲ್ಲಿ ಚಿಮ್ಮುವ ಕಾಡಿನ ಕಾರಂಜಿಯನ್ನು ತೋರಿಸಬಹುದು.




ಹೀಗೆ ಅಕ್ಷರದ ಕವನ ಮತ್ತು ವೀಕವನದ ಮೂಲಭೂತ ಆಶಯಗಳು ಒಂದೇ ಆದರೂ ಅವುಗಳ ನಿರ್ಮಾಣದ ಪ್ರಕ್ರಿಯೆ ಮಾತ್ರ ಪೂರ್ಣ ಭಿನ್ನವಾಗಿರುತ್ತದೆ.




ಇದುವರೆಗೆ ಎನ್. ಭವಾನಿಶಂಕರ್ ನಿರ್ಮಿಸಿದ ವೀಡಿಯೋ ಕವನಗಳ ಸಂಖ್ಯೆ ೬೦ಕ್ಕೂ ಹೆಚ್ಚು. ಚಪ್ಪಲಿಗಳು ಎಂಬ ವೀಡಿಯೋ ಕವನದಲ್ಲಿ ಮನುಷ್ಯ ಪಾತ್ರಗಳಿದ್ದರೆ, ಶಿವ ಎಂಬ ಕೃತಿಯಲ್ಲಿ ಕೇವಲ ಸಮುದ್ರ ಮಾತ್ರ ಇದೆ. ನನ್ನ ಭಾರತ ಎಂಬುದು ರಾಜಕಾರಣ ಮತ್ತು ಬಡತನದ ವಾಸ್ತವವನ್ನು ಅಸಂಗತ ತಂತ್ರದ ಮೂಲಕ ಹೇಳುವ ಕವನ.




ಇದುವರೆಗೆ ಅವರು ನಿರ್ಮಿಸಿದ ವೀಡಿಯೋ ಕವನಗಳು: ಹಸಿರು, ಶಿವ, ಅವನತಿ, ರುದ್ರ, ಸಾಂಸ್ಕೃತಿಕ ಬಿಕ್ಕಟ್ಟು, ಸೌಂದರ್ಯ ಮತ್ತು ಸತ್ಯ, ಪ್ರಕೃತಿಗೆ, ಬಾಹುಬಲಿಗೆ ನಮಸ್ಕಾರ, ಆಸ್ಪೋಟ, ಸಮುದ್ರ ಮತ್ತು ಮನುಷ್ಯ, ಭವಿಷ್ಯತ್ತಿನ ಕನಸುಗಳು, ಒಂದು ಬೀಚಲ್ಲಿ ಒಂದು ಸಂಜೆ, ಗಾಳಿಪಟ, ಓ ದೇವ್ರೆ, ಚಪ್ಪಲಿಗಳು, ಕಲ್ಲು ಕರಗುವ ಸಮಯ, ಡಾರ್ಲಿಂಗ್, ಚೈನು, ನನ್ನ ಭಾರತ, ಭೂತ, ಚೂರಿ ಮತ್ತು ದೇವರು, ಕಲಾತ್ಮಕ ಧ್ಯಾನ, ಅನೇಕ, ಕೋಣಗಳ ಭಾವನೆಗಳು, ಬಣ್ಣಗಳ ನೃತ್ಯ, ಪೂರ್ವದಿಂದ ಪಶ್ಚಿಮಕ್ಕೆ ಅಥವಾ, ಜಾತ್ರೆ ಮತ್ತು ಭಕ್ತಿ, ಕ್ರೌರ್ಯ, ಕೃಷ್ಣ ಸಂಭ್ರಮ, ಲಾವಾ ಕವನ, ತಾಯಿ ನೇತ್ರಾವತಿ, ನೈಸ್ ಜಾಬ್, ಪ್ರತಿಭಟನೆ, ರಥ ಜನ ಜನ ರಥ, ಹುಡುಕಾಟ, ಮಾತನಾಡುವ ಹುಲಿಗಳು, ಒಂದು ಭೂಮಿಯ ಕತೆ, ತುಳು ಹಳ್ಳಿಯ ಚಿತ್ರಗಳು, ಕಲ್ಪನೆಯ ಬೆರಳುಗಳು, ಭಗೀರಥರು, ಕಲ್ಪನೆಗೊಂದು ಮಿತಿ, ಹೆಣ್ಣಿನ ಜನ್ಮ ಹಾಳು ಇತ್ಯಾದಿ.




ಎನ್. ಭವಾನಿಶಂಕರ್, ಸಂತ ಮೇರಿ ಕಾಲೇಜು, ಕನ್ನಡ ಉಪನ್ಯಾಸಕರು, ಶಿರ್ವ, ಉಡುಪಿ ಜಿಲ್ಲೆ-೧೯೮೦ ರಿಂದಪತ್ರಿಕಾ ಲೇಖನಗಳು- ೭೦ ಕ್ಕ್ಕೂ ಜಾಸ್ತಿ (೧೯೮೨-೮೫)ಪತ್ರಿಕೆಯಲ್ಲಿ ಪ್ರಕಟವಾದ ಸ್ಥಿರ ಚಿತ್ರಗಳು-೨೫ (೧೯೮೨-೮೫)ಕವನ ಸಂಕಲನಗಳು-೨ ಏಳಯ್ಯ ಬಾಲಿಬಹು, ಮೀನು ಮಲ್ಲಿಗೆ (೧೯೮೨- ೮೩)ನಾಟಕಗಳು-೫ ಜಿಂದಾಬಾದ್ ಜಿಂದಾಬಾದ್ , ಬ್ರಾಹ್ಮಣ ಶೂದ್ರ , ಕೆಂಪು ಕೋಗಿಲೆಗೋಲೀಬಾರ್, ಪ್ರೇಮಾಸೈಟಿಸ್ (೧೯೮೨-೮೪)ಸಂಪಾದಕರು:ಬಳಕೆದಾರರ ಪತ್ರಿಕೆ, ಶಿರ್ವ (೧೯೮೩)ಆಕಾಶವಾಣಿ, ಮಂಗಳೂರು:ಕವನ ವಾಚನ, ಚರ್ಚೆ, ಸಂದರ್ಶನ, ನಾಟಕ ನಿರ್ದೇಶನ (೧೯೮೩-೮೮)ಅಧ್ಯಕ್ಷರು:ಜಾಸ್ಮಿನ್ ಜೇಸಿಸ್, ಶಿರ್ವ (೧೯೮೪-೮೫)ಸೈಂಟ್ ಮೇರಿ ಕಾಲೇಜಿನಲ್ಲಿ ಕಂಪ್ಯೂಟರ್ ಶಿಕ್ಷಕನಾಗಿ (೧೯೯೧-೯೩)ಶೈಕ್ಷಣಿಕ ಚಿತ್ರ ನಿರ್ಮಾಣ (೨೦೦೦-) ೧೯೦ ಚಿತ್ರಗಳುಸಂತ ಮೇರಿ ಕಾಲೇಜಿನಲ್ಲಿ ಪ್ರತೀ ಶನಿವಾರ ಮಧ್ಯಾಹ್ನ, ಶೈಕ್ಷಣಿಕ ಚಿತ್ರಗಳನ್ನು ಬಳಸಿ ಬೇರೆ ಬೇರೆ ವಿಷಯಗಳನ್ನು ಕುರಿತ ಪಾಠ (೨೦೦೬-)




ವಿಳಾಸ: ಎನ್. ಭವಾನಿಶಂಕರ್, ಸಂತ ಮೇರಿ ಕಾಲೇಜು, ಕನ್ನಡ ಉಪನ್ಯಾಸಕರು, ಅಂಚೆ: ಶಿರ್ವ, ಉಡುಪಿ ಜಿಲ್ಲೆ-೫೭೪೧೧೬, ದೂರವಾಣಿ: ೦೮೨೦-೨೫೫೪೮೯೮, ೯೨೪೨ ೨೩೨೩೨೩***

4 comments:

  1. nimma kalaa prajne mechchabekaaddu

    ReplyDelete
  2. Dear Sir,Please send your email address to me. Thaks. vilaslatthe@yahoo.co.in.

    ReplyDelete
  3. PÀ¯Áåt J°ègÀÄªÉ ¤Ã¤°è ºÉüÀÄ!
    ¥Ë½ E®èzÀ UÀÄrAiÀÄÄ UÀÄrAiÉÄà C¯Áè!!
    ¨sÀPÀÛgÁ £É¯ÉUÁV ¥Àæ¥Á¹ d£ÀPÁV
    ¥ÀÆeÉÃAiÀiÁ PÁAiÀÄðPÉÌ £É¯ÉAiÉÆAzÀÄ ¨ÉÃPÀÄ
    zÀÆgÀzÁ d£ÀPÁV zsÀªÀÄðbÀvÀæªÀÅ EgÀ°
    C£ÀßzÁ£ÀPÉ C°è £É¯ÉAiÀÄÄ EgÀ°
    D±ÉAiÀiÁ ¥Àj¸ÀgÀzÀ £ÉgÀ¼ÀÄ EgÀ°
    zÉêÀ£ÉƮĪÉÄAiÀÄ ±ÁAw ¸ËPÀAiÀÄð«gÀ°
    ¤ªÀÄð¯Á £É¯ÉUÁV ±ÀÄaAiÀÄÄ EgÀ°
    ©üqÀÄ ©qÀzÀ d£À PÁ¯Éà QüÀÄvÀ°gÀ°
    ¥ÀÆdå ¨sÁªÀ£ÉAiÀÄ°è C£ÀĪÀgÀvÀ §gÀ°
    ¥ÁæxÀð£É ¸À°è¸ÀĪÀ ¨sÀPÀÛgÁ£ÉgÀ«gÀ°
    - - «¯Á¸À ®oÉ×

    ReplyDelete
  4. TAPOVAN: AT THE CROSS ROADS OF TAPOVAN.
    I‘ve NO FRIENDS ANDE NO FOES
    Standing at the cross roads of TAPOVAN
    This may be cause for perfection of life
    Life is so sweet and that unrest always
    I was standing between principles’ and principals
    Principals for t5he cause of earning
    And principles for the cause of good deeds.
    Cause of life may not only be for money making
    But it be for leads life. Which you may call
    Leading but not for eating only
    Tapovan sanyasi stood at the gates
    And welcomed me there.
    One thing else I’ve to mention here corrupt principals
    Made me to stand at the crossing roads, I say.
    Vilas Latthe MIG I/6 KHB C Navanagar , Hubli-580 025.11/09/2016






    TAPOVAN: AT THE CROSS ROADS OF TAPOVAN.
    I‘ve NO FRIENDS ANDE NO FOES
    Standing at the cross roads of TAPOVAN
    This may be cause for perfection of life
    Life is so sweet and that unrest always
    I was standing between principles’ and principals
    Principals for t5he cause of earning
    And principles for the cause of good deeds.
    Cause of life may not only be for money making
    But it be for leads life. Which you may call
    Leading but not for eating only
    Tapovan sanyasi stood at the gates
    And welcomed me there.
    One thing else I’ve to mention here corrupt principals
    Made me to stand at the crossing roads, I say.
    Vilas Latthe MIG I/6 KHB C Navanagar , Hubli-580 025.11/09/2016










    ReplyDelete